Ration Card Cancel | ರೇಷನ್ ಕಾರ್ಡ್ ರದ್ದು
ಎಲ್ಲರಿಗೂ ನಮಸ್ಕಾರ ಇವತ್ತಿನ ಈ ಒಂದು ವರದಿಯಲ್ಲಿ ನಾವು ರೇಷನ್ ಕಾರ್ಡ್ ಗಳು ರದ್ದು ಅನ್ನೋ ಒಂದು ಮಾಹಿತಿ ಹರಿದಾಡುತ್ತಿದೆ. ಹಾಗಾದ್ರೆ ರೇಷನ್ ಕಾರ್ಡ್ ನಿಜವಾಗಲೂ ರದ್ದಾಗತ್ತ, ರದ್ದಾದರೆ ಯಾಕೆ ರದ್ದಾಗತ್ತೆ ಅನ್ನೋ ಮಾಹಿತಿಯನ್ನ ಈ ವರದಿಯಲ್ಲಿ ನೋಡೋಣ.
BPL ರೇಷನ್ ಕಾರ್ಡ್ ರದ್ದು.
ಅರ್ಹತೆ ಇರೋರಿಗೆ BPL ರೇಷನ್ ಕಾರ್ಡ್ ಕೊಡೋದು ಆದರೆ ಅರ್ಹತೆ ಇಲ್ಲಾ ಅಂದ್ರು ತುಂಬಾ ಜನ ದುಡ್ಡು ಕೊಟ್ಟು BPL ರೇಷನ್ ಕಾರ್ಡ್ ಪಡೆದಿದ್ದಾರೆ. ಆದ್ದರಿಂದ BPL ಕಾರ್ಡ್ ಗಳನ್ನು ನಮ್ಮ ಸರ್ಕಾರ ರದ್ದು ಮಾಡುವ ಯೋಚನೆ ಮತ್ತು ಕಾರ್ಯಾಚರಣೆ ಶುರು ಮಾಡಿದೆ.
ಅರ್ಹ ರೇಷನ್ ಕಾರ್ಡ್ ಗಳು ರದ್ದು.
ಹೌದು BPL ರೇಷನ್ ಕಾರ್ಡ್ ಪಡೆಯಲು ಅರ್ಹತೆ ಇದ್ದು ಅವರು ರೇಷನ್ ಕಾರ್ಡ್ ಹೊಂದಿದ್ದು ಅಂತ ಪಲಾನುಭವಿಗಳ ರೇಷನ್ ಕಾರ್ಡ್ ಗಳು ಕೂಡ ಕೆಲವು ರದ್ದಾಗಿವೆ. ಕಾರಣ ಕೇಳಿದರೆ ಅವರು ಆಧಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಅವರ ರೇಷನ್ ಕಾರ್ಡ್ ಅನ್ನು BPL ಇಂದ APL ಗೆ ಬದಲಾವಣೆ ಮಾಡಿದಾರೆ.
ಹೊಸ BPL ರೇಷನ್ ಕಾರ್ಡ್ ಪಡೆಯಲು ಇರುವ ಮಾನದಂಡಗಳು.
ಹೊಸ BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ ಮತ್ತು ಏನೆಲ್ಲಾ ಮಾನದಂಡಗಳಿವೆ ಎಂದು ನೋಡೋಣ. BPL ಇದರ ಹೆಸರಲ್ಲೇ ಇರೋ ಹಾಗೆ ಬಡತನ ರೇಖೆಗಿಂತ ಕೆಳೆಗೆ ಇರೋರಿಗೆ ಮಾತ್ರ ಅನ್ವಯ ಆಗುತ್ತದೆ.
ಇರುವ ಮಾನದಂಡಗಳು
1. ಆಧಾಯ ಪ್ರಮಾಣ 1.2 ಲಕ್ಷಗಳನ್ನು ಮಿರಬಾರದು.
2. ಸ್ವಂತ ನಾಲ್ಕು ಚಕ್ರದ ವಾಹನ (ವೈಟ್ ಬೋರ್ಡ್ ) ಹೊಂದಿರಬಾರದು.
3. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್ ಗಿಂತ ಜಾಸ್ತಿ ಭೂಮಿ ಹೊಂದಿರಬಾರದು
4. ನಗರ ಪ್ರದೇಶ ದಲ್ಲಿ 1000 ಚದರ ಅಡಿ ಜಾಗವನ್ನು ಹೊಂದಿರಬಾರದು
5. ಸರ್ಕಾರಿ ಕೆಲಸದಲ್ಲಿ ಇರಬಾರದು.
6. ಸರ್ಕಾರಿ ಆದಿನದಲ್ಲಿ ಇರುವ ಇರುವ ಸಂಘ ಸಂಸ್ಥೆಯಲ್ಲಿ ಕೆಲಸ ಇರಬಾರದು
BPL ರೇಷನ್ ಕಾರ್ಡ್ ಇಂದ APL ರೇಷನ್ ಕಾರ್ಡ್
ಅರ್ಹ ರೇಷನ್ ಕಾರ್ಡ್ ಗಳನ್ನು APL ಗೆ ಬದಲಾವಣೆ ಮಾಡುವುದಾಗಿ ಸರ್ಕಾರ ಹೇಳಿದ್ದು, ಯಾವೆಲ್ಲಾ ಕಾರ್ಡ್ ಗಳು APL ಗೆ ಬದಲಾವಣೆ ಆಗಬಹುದು ಅಂದರೆ, ಸರ್ಕಾರಿ ಕೆಲಸದಲ್ಲಿ ಇರುವವರು ಕಾರ್ಡ್ ಬದಲಾವನೇ, ಸ್ವಂತ ಕಾರ್ ಇರೋರಿಗೂ ಕೂಡ ಕಾರ್ಡ್ ಬದಲಾವಣೆ,
ಅರ್ಹ BPL ಕಾರ್ಡ್ ಬದಲಾವಣೆ ಆಗಲ್ಲ
ಸರ್ಕಾರ ಇವಾಗ ತಿಳಿಸಿರುವುದೇನಂದರೆ ಅರ್ಹ ಅಂದರೆ ಬಡ ಜನತೆಗೆ ಇರುವ BPL ಕಾರ್ಡ್ ಅನ್ನು ಬದಲಾವಣೆ ಮಾಡಲ್ಲ, ಬದಲಾವಣೆ ಆದಲ್ಲಿ ಅದನ್ನು ಮರುಪರಿಶೀಲನೆ ಮಾಡಿ ಅರ್ಹತೆ ಇದ್ದಲ್ಲಿ APL ಅನ್ನು BPL ಕಾರ್ಡ್ ಆಗಿ ಬದಲಾವಣೆ ಮಾಡುಲಾಗತ್ತೆ.
ಧನ್ಯವಾದಗಳು