ಆಧಾರ ಅಲ್ಲಿ ಅಡ್ರೆಸ್ ಹೇಗೆ ಚೇಂಜ್ ಮಾಡುವುದು?
ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ನಾನು ಹಂತ ಹಂತವಾಗಿ ಆಧಾರ ವಿಳಾಸ ಬದಲಾವಣೆಯ ಮಾಹಿತಿಯನ್ನು ನೀಡಿದ್ದು ಕೊನೆಯವರೆಗೂ ಸರಿಯಾಗಿ ಓದಿ ನಾನು ನೀಡಿರುವ ಹಂತಗಳ ಪ್ರಕಾರ ನಿಮ್ಮ ಆಧಾರ ವಿಳಾಸ ಬದಲಾವಣೆ ಮಾಡಿಕೊಳ್ಳಿ.
ಆಧಾರ ಅಡ್ರೆಸ್ ಚೇಂಜ್ ಮಾಡಲು ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು.
ಆಧಾರ ಅಲ್ಲಿ ಯಾವುದೇ ಚೇಂಜ್ ಮಾಡೋಕೆ ಹೋದರೆ ಅದಕ್ಕೆ ಬೇಕಾದ ಡಾಕ್ಯುಮೆಂಟ್ಸ್ ತುಂಬಾ ಮುಖ್ಯ ಯಾಕೆ ಅಂದರೆ ಡಾಕ್ಯುಮೆಂಟ್ ಇಲ್ಲದೆ ಯಾವುದೇ ಬದಲಾವಣೆ ಆಗುವುದಿಲ್ಲ ಅದಕ್ಕೆ ಅಡ್ರೆಸ್ ಬದಲಾವಣೆ ಮಾಡಲು ಬೇಕಾಗುವ ಕೆಲವೊಂದು ಡಾಕ್ಯುಮೆಂಟ್ಸ್ ಲಿಸ್ಟ್ ಅನ್ನು ನಾನು ಈ ಕೆಳಗೆ ನೀಡಿದ್ದೇನೆ.
- ವೋಟರ್ ಐಡಿ
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಕರೆಂಟ್ ಬಿಲ್
- ಗ್ಯಾಸ್ ಬಿಲ್
- ವಾಟರ್ ಬಿಲ್
ಈ ಮೇಲೆ ನೀಡಿರುವ ಯಾವುದಾದರೂ ಒಂದು ಡಾಕ್ಯುಮೆಂಟ್ ಇದ್ದರೆ ಸಾಕು ನೀವು ನಿಮ್ಮ ಮನೆಯಲ್ಲಿಯೇ ನಿಮ್ಮ ಆಧಾರ ಅಡ್ರೆಸ್ಸ್ ಬದಲಾವಣೆ ಮಾಡಬಹುದು.
ಆಧಾರ ಅಡ್ರೆಸ್ ಚೇಂಜ್ ಮಾಡುವ ಹಂತಗಳು
ಮೊದಲನೇ ಹಂತ : ಮೊದಲನೇ ಹಂತದಲ್ಲಿ ನೀವು ಬೇಕಾದ ಎಲ್ಲ ಡಾಕ್ಯುಮೆಂಟ್ಸ್ ರೆಡಿ ಮಾಡಿಕೊಂಡ ಮೇಲೆ ಆಧಾರ ಅಡೀಕೃತ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ https://uidai.gov.in/en/.
ಎರಡನೇ ಹಂತ: ವೆಬ್ಸೈಟ್ ಓಪನ್ ಆದಮೇಲೆ ಅಲ್ಲಿ my Aadhaar ಅಂತ ಒಂದು ಆಪ್ಶನ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಆಮೇಲೆ ಅದರಲ್ಲಿ "Update Demographic Data & Check Status" ಅಂತ ಇದೆ ಕ್ಲಿಕ್ ಮಾಡಿ.
ಆಮೇಲೆ ಅಲ್ಲಿ ನಿಮಗೆ ಲಾಗಿನ್ ಆಗೋಕೆ ವಿಂಡೋ ಓಪನ್ ಆಗತ್ತೆ ಅಲ್ಲಿ ಲಾಗಿನ್ ಮೇಲೆ ಕ್ಲಿಕ್ ಮಾಡಿ ಆಮೇಲೆ ನಿಮಗೆ ನಿಮ್ಮ ಆಧಾರ ನಂಬರ್ ಹಾಕಿ ಮತ್ತೆ ಓಟಿಪಿ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ ನಂಬರ್ ಗೆ ಜೊಡನೆಯಾಗಿರುವ ನಂಬರ್ ಗೆ ಓಟಿಪಿ ಬರತ್ತೆ ಓಟಿಪಿ ಅಲ್ಲಿ ಹಾಕಿ ಲಾಗಿನ್ ಮಾಡಿ.
ಆಧಾರ ಡಿಪಾರ್ಟ್ಮೆಂಟ್ ಅವರು ನೀವು ಹಾಕಿರುವ ಮಾಹಿತಿ ಮತ್ತು ನೀವು upload ಮಾಡಿರುವ ಡಾಕ್ಯುಮೆಂಟ್ ಸರಿಯಾಗಿದ್ದರೆ ಅದನ್ನ ಅಪ್ರೂವ್ ಮಾಡುತ್ತಾರೆ. ಸರಿಯಾಗಿ ಇಲ್ಲವಾದಲ್ಲಿ ಅಪ್ಲಿಕೇಷನ್ ರಿಜೆಕ್ಟ್ ಮಾಡುತ್ತಾರೆ. ಅಪ್ರೂವ್ ಆದಮೇಲೆ 15 ದಿನಗಳ ಕಾಲವಕಾಶದಲ್ಲಿ ನೀವು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಆಧಾರ ಕಾರ್ಡ್ ನಿಮ್ಮ ಮನೆಗೆ ಬರುತ್ತದೆ. ಒಂದು ವೇಳೆ ಬಂದಿಲ್ಲ ಅಂದಲ್ಲಿ ನೀವು ಆಧಾರ ವೆಬ್ಸೈಟ್ ಅಲ್ಲಿ e-Aadhaar ಡೌನ್ಲೋಡ್ ಮಾಡಿಕೊಳ್ಳಬಹುದು.