ಎಲ್ಲರಿಗೂ ನಮಸ್ಕಾರ ಹೇಗಿದ್ದೀರ ಎಲ್ಲರೂ.... ಈ ಒಂದು ಪೋಸ್ಟ್ ಅಲ್ಲಿ ನಾನು blog ಯಾವ ತರಾ ಕ್ರಿಯೇಟ್ ಮಾಡುವುದು ಎಂದು ಹೇಳಿ ಕೊಡುತ್ತೇನೆ.
1. ಮೊದಲನೆಯದಾಗಿ blog ಅಂದ್ರೆ ಏನು ಅಂತಾ ನನಗೆ ತಿಳಿದಿರೋ ಅಷ್ಟು ನಾನು ಇಲ್ಲಿ ಹೇಳುತ್ತೇನೆ.
Blog ಅಂದ್ರೆ ಬ್ಲಾಗ್ ಅಂತರ್ಜಾಲದ ಒಂದು ವಿಧವಾಗಿದ್ದು, ಸಾಮಾನ್ಯವಾಗಿ ಪ್ರತ್ಯೇಕ ಖಾಸಗಿ ವ್ಯಕ್ತಿಗಳಿಂದ ನಿರ್ವಹಿಸಲ್ಪಡುವ ತಾಣವಾಗಿರುತ್ತದೆ. ಇದರಲ್ಲಿ ಪ್ರತಿಕ್ರಿಯಾತ್ಮಕ ಲೇಖನಗಳು, ಕಾರ್ಯಕ್ರಮಗಳ ವಿವರಣೆ, ಗ್ರಾಫಿಕ್ಸ್, ವಿಡಿಯೋ ಮೊದಲಾದವುಗಳನ್ನು ನಿರಂತರವಾಗಿ ದಾಖಲಿಸಲಾಗುತ್ತದೆ.
2. ಬ್ಲಾಗ್ ಅನ್ನು ಕ್ರಿಯೇಟ್ ಮಾಡಲು ಮೊದಲು ಜಿಮೈಲ್ ಅಕೌಂಟ್ ಇರಬೇಕು.
3. ಇವಾಗ ನಿಮ್ಮ ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ ಸರ್ಚ್ ಬಾರ್ ಅಲ್ಲಿ "Blogger.com" ಅಂತಾ ಟೈಪ್ ಮಾಡಿ ಸರ್ಚ್ ಕೊಡಿ
Blogger.com ಪೇಜ್ ಓಪನ್ ಆಗತ್ತೆ ಅದರಲ್ಲಿ ನೀವು "CREATE YOUR BLOG" ಅಂತಾ ಬಟನ್ ಕಾಣಿಸುತ್ತೆ
ಆ ಬಟನ್ ಮೇಲೆ ಕ್ಲಿಕ್ ಮಾಡುವದರ ಮೂಲಕ ನಿಮಗೆ ಇನ್ನೊಂದು ಪೇಜ್ ಓಪನ್ ಆಗತ್ತೆ ಅದರಲ್ಲಿ ಜಿಮೈಲ್ ಇಂದಾ ಲಾಗಿನ್ ಆಗಿ
ಲಾಗಿನ್ ಆದಮೇಲೆ ನಿಮಗೆ title ಪೇಜ್ ಓಪನ್ ಆಗತ್ತೆ ಅಲ್ಲಿ ನಿಮಗೆ ಬೇಕಾದ ಅಂದ್ರೆ ನೀವು ಯಾವುದರ ಬಗ್ಗೆ ಆರ್ಟಿಕಲ್ ಅನ್ನು ಪೋಸ್ಟ್ ಮಾಡ್ತಿರೋ ಆ ರಿಲೇಟೆಡ್ ಅಲ್ಲಿ ಟೈಟಲ್ ಅನ್ನು ಹಾಕಿ.
ಟೈಟಲ್ ಅನ್ನು ಹಾಕಿದ ಮೇಲೆ ಸೇವ್ ಮಾಡಿ ನೆಕ್ಸ್ಟ್ ಪೇಜ್ ಓಪನ್ ಆಗತ್ತೆ ಅಲ್ಲಿ url ಅನ್ನು ಕೇಳತ್ತೆ ಅಲ್ಲಿ ನಿಮ್ಮ ಆರ್ಟಿಕಲ್ ಅನ್ನು ಹೋಲುವ url ಅನ್ನು ಹಾಕಿ ಅದು ನಿಮ್ಮ ಬ್ಲಾಗ್ ನ ಹೆಸರಾಗಿರುತ್ತದೆ.
ನೀವು ಹಾಕಿರುವ url ಅವೈಲಬಲ್ ಇದ್ದಾರೆ ನೆಕ್ಸ್ಟ್ ಅಂತಾ ಕ್ಲಿಕ್ ಮಾಡಿ ಅವಾಗ ನಿಮ್ಮ ಬ್ಲಾಗ್ ಕ್ರಿಯೇಟ್ ಆಗಿರುತ್ತದೆ.
ಈ ರೀತಿ ನಾವು ಬ್ಲಾಗ್ ಅನ್ನು ಫ್ರೀ ಆಗಿ ಕ್ರಿಯೇಟ್ ಮಾಡಬಹುದು.
ಧನ್ಯವಾದಗಳು